ಬೆಂಗಳೂರು- ನಗರದ ವಿ ಕೆ ಎಂ ಕಲಾವಿದರು ತಂಡದಿಂದ ಇದೇ ದಿ.18 ರಂದು ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿರುವ ಬಾಪೂಜಿ ಕಲಾ ಮಂದಿರದಲ್ಲಿ ರಾತ್ರಿ 8 ಗಂಟೆಗೆ ಶ್ರೀ ಸುಮಿತ ಕಲಾ ಸಮಿತಿಯು ಆಯೋಜಿಸುತ್ತಿರುವ ಅಖಿಲ ಭಾರತ ಬಹು ಭಾಷಾ ನಾಟಕ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದು, ಖ್ಯಾತ ಸಾಹಿತಿ ಡಾ. ಚಂದ್ರಶೇಖರ ಕಂಬಾರರ 'ಸಂಗ್ಯಾ ಬಾಳ್ಯ ನಾಟಕವನ್ನು ಪ್ರಸ್ತುತ ಪಡಿಸುತ್ತಿದೆ.
ಈ ನಾಟಕವನ್ನು ನಿರ್ದೇಶನವನ್ನು ಸಿ ಎಂ ತಿಮ್ಮಯ್ಯ ಅವರು ಮಾಡಿದ್ದು, ಸಹ ನಿರ್ದೇಶನವನ್ನು ವಿ.ನಾಗರತ್ನ ಹಾಗೂ ಅಪ್ಪಾಜಿ ಅವರು ನಿರ್ವಹಿಸಿದ್ದಾರೆ.
ಸಂಗೀತ ಸಂಯೋಜನೆಯನ್ನು ಲಕ್ಷ್ಮಣ್ ಸುವರ್ಣ, ಹಾಡು ಶ್ರೀಮತಿ ಶಾರದಾ, ತಬಲ ವಾದ್ಯ ಶ್ರೀ ರಾಮಣ್ಣ, ತಮಟೆ ವಾದ್ಯ:
ಶ್ರೀ ಪ್ರವೀಣ್, ಬೆಳಕು ಶ್ರೀಮತಿ ರತ್ನ ನಾಗೇಶ್ ಮತ್ತು ಶ್ರೀ ಮಹದೇವಪ್ಪ ಅವರದ್ದು.
ಪಾತ್ರಧಾರಿಗಳಾಗಿ ಅನ್ಮೋಲ್, ವಜ್ರ, ರಾಕೇಶ್, ರಮೇಶ್, ಸುಬ್ಬುರಾಯುಡು, ರಘು, ಮಹೇಶ್ವರಯ್ಯ, ದರ್ಶನ, ರಮೇಶ್, ವೆಂಕಟರಮಣಪ್ಪ, ರಾಮಕಿರಣ್, ರವಿಕುಮಾರ್, ಪವಿತ್ರ, ಧನಲಕ್ಷ್ಮಿ ಮುಂತಾದವರು ಅಭಿನಯಿಸುತ್ತಿದ್ದಾರೆ.







